Deepotsava

ಪೂರ್ಣ ಪ್ರಙ ಶಾಲೆಯ ಪುಟಾಣಿ ಪೂರ್ವ ಪ್ರಾಥಮಿಕ ಚಿಣ್ಣರ ಲೋಕ,

ಪುಟ್ಟ ಹೆಜ್ಜೆಯ ಮಕ್ಕಳ ದಿಟ್ಟ ಹೆಜ್ಜೆಗೆ ಶಿಕ್ಷಕರೇ ಬಣ್ಣದ ನಾಕ.

ಹರುಷದಿ,ಸಂತಸದಿ ಆಚರಿಸುವರು ಶಿಕ್ಷಕರು ಪ್ರತಿಯೊಂದು ಹಬ್ಬ,

ನೋಡಲು ಎರಡು ಕಣ್ಣು ಸಾಲದು ಸಂಭ್ರಮವೇ ಇಲ್ಲಿ ಅಬ್ಬಬ್ಬಾ.

ದೀಪದಿಂದ ದೀಪವ ಬೆಳಗಬೇಕು ಮಾನವ,ಪ್ರೀತಿಯ ಬೆಳಕ ಹಚ್ಚಿ,

ಶಿಕ್ಷಕರ ಹೃದಯ ತೋರಣವೇ ಕೂಗಿ ಕರೆಯಿತು,ಸಾರಿತು ಮನಸ ಬಿಚ್ಚಿ.

ಎಂದಿನಂತೆ ಸಂಭ್ರಮಿಸಿತು ದೀಪೋತ್ಸವ,ಮನದ ಉತ್ಸವ,

ಈ ವರುಷದಿ ದೀಪದೊಂದಿಗೆ ಸ್ವಾಗತಿಸಿತು ಈ ಹಂಸೋತ್ಸವ.

ದೀಪಗಳ ಬೆಳಕು ಮರೆ ಮಾಚಿ ನಾಚಿತು ತುಂಬಿದ ಮನದ ಬೆಳಕು,

ಕಂಡು ಹರ್ಷೊದ್ಗಾರವೆನಿಸಿತು ಇಲ್ಲಿ ಇರಲಿಲ್ಲ ಯಾವುದೇ ಹುಳುಕು ಅಳುಕು.

ಹಂಸವೇ ಇಲ್ಲಿ ಬೆಳ್ಳನೇ ಬಿಳುಪಾದ ಶುಭ್ರತೆಯ ಬಿಂಬಿಸುತ್ತಿತ್ತು,

ಮನ ಮನದಲ್ಲೂ ಪ್ರತಿಯೊಬ್ಬರ ಕರದಲ್ಲೂ ಬೆಳಕ ಚೆಲ್ಲುತಿತ್ತು.

ಪುಟಾಣಿ ಮಕ್ಕಳ ಹೃದಯವು ಶುಭ್ರ ಪರಿಶುದ್ಧ ಹಾಲಿನಂತೆ,

ಇಲ್ಲಿನ ಶಿಕ್ಷಕರು ಆ ಮಕ್ಕಳ ಭವಿಷ್ಯದ ಪಾಲಕರಂತೆ.

ದೀಪೋತ್ಸವವು ಎಲ್ಲೆಡೆಯೂ ಹರುಷದಿ ಸಂಭ್ರಮಿಸುತ್ತಿತ್ತು,

ಹಂಸವು ಶುಭ್ರತೆಯಿಂದ ಹಂಸನಾಗಿ ಕುಳಿತು ರಂಜಿಸುತ್ತಿತ್ತು.

ತಾಯಿ ಲಕ್ಷ್ಮೀಯು ನಿಮ್ಮಲ್ಲೆರ ಭವ್ಯ ಭವಿಷ್ಯಕ್ಕೆ ನಿಂತು ಹರಸಿದಳು,

ಕಂಡು ಆ ತಾಯಿ ಆನಂದಸಿದಳು ತೇಲಾಡಿ ನಲಿವ ನೀಡಿದಳು.

ಅಂತು ಸಂಭ್ರಮದಿ ಸಾಗಿತು,ಸಾಗಿತು ನಿಮ್ಮೆಲ್ಲರ ದೀಪೋತ್ಸವ,

ಹೊಸ ರೀತಿಯಲಿ ಹಸನಾಗಿತ್ತು ಸೃಜನಾತ್ಮಕ ಹಂಸೋತ್ಸವ

Poem written by Ms. Tanuja Shivakumar

Tags: No tags

Comments are closed.