KARAN of Std 7 A has won 1st prize in drawing and colouring competition organised by ‘Siri Kannadaosthava – 2024’. KARAN has recognised as Child Artist of Karnataka.
ಎಲ್ಲರಿಗೂ ಶುಭ್ರ ವಂದನೆ …
ಪೂರ್ಣ ಪ್ರಜ್ಞ ಸದಾಶಿವನಗರ ಶಾಲೆಯ ಪ್ರತಿಭಾವಂತ ಚಿತ್ರಕಲೆಯ ಏಳನೇ ತರಗತಿ ‘ಎ’ ವಿಭಾಗದ ವಿದ್ಯಾರ್ಥಿಯಾದ ಕರಣ.ಎ. ಇವನು ಚಿತ್ರಕಲೆಯ ಪ್ರತಿಭಾನ್ವಿತ ಬಾಲಕ .
ಮಹಿಳೆಯ ಮಧುರ ಮಾಸಿಕ ಪತ್ರಿಕೆಯಾದ “ಪ್ರಿಯಾಂಕ ಪತ್ರಿಕೆಯಲ್ಲಿ” ಚಿತ್ತ ಕದ್ದ ಚಿಣ್ಣರ ಚಿತ್ರಗಳು ಎಂಬ ಅಂಕಣದಲ್ಲಿ ಎಲ್ಲರನ್ನೂ ಆಕರ್ಷಿಸುವ ಅರ್ಥಪೂರ್ಣ ಜೋಡನೆ, ದೂರದಿಂದಲೇ ಆಕರ್ಷಿಸುವ ಚಿತ್ರಗಳ ಸೌಂದರ್ಯ, ಹೀಗೆ ಕಲಾ ಕೃತಿಯನ್ನು ಭಾವಪೂರ್ಣ ಲೋಕಕ್ಕೆ ವಿಭಿನ್ನ ಚಾಣಾಕ್ಷತೆಯಿಂದ ವಿನೂತನ ಅಚ್ಚರಿಯ ಮೂಲಕ ಕಲಾ ನೋಟಕ್ಕೆ ಮೆರಗು ನೀಡುವಂತಹ ವಿದ್ಯಾರ್ಥಿ..
ಪ್ರತಿಯೊಬ್ಬರಿಗೂ ಚಿತ್ರಕಲಾ ಲೋಕಕ್ಕೆ ಸ್ಪೂರ್ತಿಯನ್ನು ಪ್ರತಿಭೆಯನ್ನು ನೀಡಿ ಪ್ರೋತ್ಸಾಹಿಸುವ ನಮ್ಮ ಶಾಲೆಯ ಪರವಾಗಿ ಪ್ರಾಂಶುಪಾಲರು, ಶಿಕ್ಷಕರು,ವಿಶೇಷವಾಗಿ ಇವನ ಪ್ರತಿಭೆಯನ್ನು ಗುರುತಿಸಿ ಬೆಳೆಸಿದ ಚಿತ್ರಕಲಾ ಶಿಕ್ಷಕರು, ವಿದ್ಯಾರ್ಥಿಗಳು ಸೇರಿ ಈ ಚಿತ್ರಕಲಾ ವಿದ್ಯಾರ್ಥಿಯನ್ನು ಅಭಿನಂದಿಸೋಣ. ಪ್ರೋತ್ಸಾಹಿಸೋಣ..
ಧನ್ಯವಾದಗಳು
Add a Comment